ಕತ್ತಲ ಸುತ್ತಲೂ....

ಕಣ್ಣು ಹಾಯಿಸಿದಷ್ಟು ದೂರ ಕತ್ತಲು, ಬರೀ ಕತ್ತಲು
ಕತ್ತಲ ಸುತ್ತೆಲ್ಲ ಬತ್ತಲಾಗಿರುವ ಭಾವಗಳು..
ಬಚ್ಚಿಡುವ ಬಯಕೆಗಳಿಲ್ಲ, ಬಿಚ್ಚಿಡಲು ಬೇಸರವಿಲ್ಲ
ಕೈ ಹಿಡಿದು ನಡೆಯಬಹುದು ದಾರಿಯುದ್ದಕ್ಕೂ,
ಅಲ್ಲೊಂದು ಸುಖವಿದೆ, ಕತ್ತಲಿಗಿನ್ನೊಂದು ಮುಖವಿದೆ!
ಆದರೂ ಕತ್ತಲು ಕತ್ತಲೇ...
ಹಚ್ಚಬೇಕಿದೆ ಬದುಕಿಗೆ ದಾರಿದೀಪ
ತಾಗಿದಂತಿದೆ ಯಾವುದೋ ನೋವಿನ ಶಾಪ
ಬೆಳಕಲ್ಲಿ-
ಭಾವಗಳ ಓರೆಕೋರೆಗಳ ಬಚ್ಚಿಡಲು
ಬೇಕು ಬಣ್ಣದ ಬವಣೆ,
ಜೀವದ ಬಯಕೆ-ಬೇಗೆಗಳ ಮುಚ್ಚಿಡಲು
ಬೇಕು ಒಗ್ಗದ ನಟನೆ..
ಎಲ್ಲ್ಲೋ ತಿರುವಿನಲಿ, ಯಾವುದೋ ಕ್ಷಣದಲ್ಲಿ
ಬಣ್ಣ ಬಯಲಾದಾಗ, ಭಾವವ ಬರಿದಾದಾಗ
ಆ ನೋವಿನಲಿ, ಬಯಸದ ಸಾವಿನಲಿ
ಕತ್ತಲ ಶಾಪವಿತ್ತಿತೇನೋ ಆ ಜೀವ...
ಕತ್ತಲು ಶಾಪವೋ, ಬೆಳಕು ಶಾಪವೋ,
ಯಾರ ಕೋಪವೋ, ಯಾರ ತಾಪವೋ..
ತನ್ನಂತೆ ತಾನು ಸಾಗುತಿದೆ
ಬೆಳಕಿನ ಕೊನೆಯಲ್ಲಿ ಕತ್ತಲು,
ಕತ್ತಲಿನ ಕೊನೆಯಲ್ಲಿ ಬೆಳಕು!!!!!

-ನಿಷಾದ

Comments

  1. ಬೆಳಕು ,ಕತ್ತಲಿನ ಕವನ (black and white?) ಸಕತ್ತಾಗಿದೆ!!!!
    ಆದರೆ ನನಗೆ ಬೆಳಕಿನಾಚೆಯ ಕತ್ತಲಿನ ಬಗ್ಗೆ ಅರ್ಥವಾಗಲಿಲ್ಲ ....
    ಪರಿಪೂರ್ಣ ಬೆಳಕಿನ ಹಿಂದೆ ಕತ್ತಲಿನ ಸೋಂಕಿಲ್ಲ ಎಂಬುದು ನನ್ನ ಅನಿಸಿಕೆ ....

    ReplyDelete

Post a Comment

Popular Posts