ನಿರೀಕ್ಷೆ..

ನೆಟ್ಟ ನೋಟದಲಿ, ಆಗಸದ ಅಂಚಿನೆಡೆಗೆ ನೋಡುತ ಕರಗಿಹಳು ಅಭಿಸಾರಿಕೆ..
ಕೊನೆಯಿಲ್ಲದೆ ಕಾಯುತಿಹಳು, ಕಣ್ಣಲ್ಲಿ ಕನಸುಗಳ ಮೂಟೆಯ ಹೊತ್ತು ಅಭಿಸಾರಿಕೆ..

ಸೂರ್ಯನ ಕೆಂಪಲ್ಲಿ, ಗಾಳಿಯ ತಂಪಲ್ಲಿ,
ಹೂವಿನ ಕಂಪಲ್ಲಿ, ಹಸಿರಿನ ಸೊಂಪಲ್ಲಿ
ಅವನದೇ ನೆನಪು!
ಕಾಡಿ- ಕಾಡಿ ನಸುನಗುವ ತಂದು,
ಕಾಯುತಿಹಳು ಅನುಕ್ಷಣವೂ ಅಭಿಸಾರಿಕೆ!

ಉರಿವ ಬಿಸಿಲು, ಸುರಿವ ಮಳೆಯು
ಕೊರೆವ ಚಳಿಯೂ ಅವಳೆದುರು
ಸೋತು ಶರಣಾಗಿರೆ...
ಜಗ ಅಳಿದರೂ, ಯುಗ ಕಳೆದರೂ
ಕಾಯುತಿಹಳು ಅನುಕ್ಷಣವೂ ಅಭಿಸಾರಿಕೆ!

-ನಿಷಾದ

Comments

  1. ಅಭಿಸಾರಿಕೆ...ಚಿರನೂತನೆ,ಚಿರಯ್ವನೆ....
    "ಅಭಿಸಾರಿಕೆಯ ನಿರೀಕ್ಷೆ" ..ಸುಂದರವಾಗಿ ಮೂಡಿಬಂದಿದೆ.

    ReplyDelete
  2. "Tanna tan maremachi... Tanmanke hoge hachhi... Nisheya .. Angaladi.. taaregala taragelegalali.. tanna tan Ponipa Abhisarike... Khushi aitu..

    ReplyDelete

Post a Comment

Popular Posts