ಅದ್ವೈತ


ನಾನು- ನೀನೆಲ್ಲವೂ ಸುಳ್ಳು,
ನನ್ನದು - ನಿನ್ನದೆಂಬುದೆಲ್ಲವೂ ಸುಳ್ಳು,
ಅವನು, ಅವಳು, ಅವರು, ಅದು - ಎಲ್ಲವೂ ಭ್ರಮೆ!
ನನ್ನಲ್ಲಿ ನೀನಿಹೆ, ಅವನು, ಅವಳಿದ್ದಾಳೆ.. 
ನೀನು ನೋಯಿಸುವುದು ನನ್ನನ್ನಲ್ಲ, ನಿನ್ನನ್ನೇ!
ನಾನು ದ್ವೇಷಿಸುವುದು ನಿನ್ನನ್ನಲ್ಲ, ನನ್ನನ್ನೇ!
ನಾನ್ಹೇಗೆ ನಿನ್ನ ಕೊಲ್ಲಲಿ, ನೀನು ನಾನಾಗಿರುವಾಗ?
ನಾನ್ಹೇಗೆ ನನ್ನ ಕೊಂದುಕೊಳ್ಳಲಿ, ನೀವೆಲ್ಲ ನಾನಾಗಿರುವಾಗ?
ನನಗೆ ಸಾವಿಲ್ಲ, ನಿನಗೆ ಹುಟ್ಟಿಲ್ಲ,
ರೋಗವಿರುವುದು ನಮಗಲ್ಲ,
ಗಾಯವಾಗುವುದು ನಿಮಗಲ್ಲ,
ನಾನು ಮೇಲಲ್ಲ, ನೀನು ಕೀಳಲ್ಲ.. 
ನಾನು ಮಾಡಿದ್ದು ಪುಣ್ಯವಲ್ಲ, 
ನೀನು ಮಾಡಿದ್ದು ಪಾಪವಲ್ಲ,
ಕರ್ತೃ, ಕರ್ಮ, ಕ್ರಿಯೆಯೆಲ್ಲ ಒಂದೇ!
ನಿರಂತರ, ನಿರ್ವಿಕಲ್ಪ, ನಿರಾಕಾರ, ಶಿವ!
ಒಪ್ಪಿದವರೂ, ಒಪ್ಪದಿದ್ದವರೂ,
ಅರ್ಥವಾಗದವರೂ, ಅರಗಿಸಿಕೊಂಡವರೂ 
ಎಲ್ಲರೂ ಒಂದೇ.. 
ಅಹಂ ಬ್ರಹ್ಮಾಸ್ಮಿ!



Comments

  1. Maitreyi,Yes need to Break the silence , be empowered.
    Divakar Appachi

    ReplyDelete
  2. Wow.. very nicely written.. :)

    ReplyDelete
  3. Advaita is nothing but a purest form of love without any discrimination..
    Beautiful words with full of love and compassion.
    Very nice sis��

    ReplyDelete

Post a Comment

Popular Posts