ಕೊರೆಯುವ ನರಕದಲ್ಲಿ....

ಇಲ್ಲಿ ಎಲ್ಲವೂ ತಣ್ಣಗೆ,
ಹಬೆಯಾಡುವ
ಒಂದು ಕಪ್ ಕಾಫಿ, ತಟ್ಟೆ ಉಪ್ಪಿಟ್ಟು
ತಂದಿಟ್ಟಾಗ ತರಾತುರಿಯಲ್ಲಿ
ತಿಂದರೆ ಮಾತ್ರ ರುಚಿ...
ಬಿಟ್ಟ ಬಿಸಿ ಉಸಿರು, ಎಳೆದ ನಿಟ್ಟುಸಿರು
ಎಲ್ಲವೂ ಇಲ್ಲಿ ಕೊರೆವ ತಣ್ಣಗೆ...
ಬಿಸಿ ಕಣ್ಣೀರು, ಬಿಸಿ ಭಾವಗಳು
ಎಲ್ಲವೂ ಹೊರ ಬಂದ ಚಣದಲಿ ತಣ್ಣಗೆ....!!!
ಸುರಕ್ಷತೆಯ ಬೆಚ್ಚನೆಯ ಸುಖಸ್ಪರ್ಶ,
ಇಲ್ಲಿ ಹೆಣದ ಮೈಯಂತೆ..
ಕ್ರೌರ್ಯ, ಸ್ವಾರ್ಥ, ಕಾಮ, ಮತ್ಸರ
ಮೆಲ್ಲಗೆ ಹೆಡೆಯೆತ್ತಿ,
ಸುಖ, ಪ್ರೀತಿ, ಪ್ರೇಮ, ಭಾವಾಭಿವ್ಯಕ್ತಿ
ತಣ್ಣಗೆ ಕೊಲೆಯಾಗುತ್ತದೆ!
ಹವಾನಿಯಂತ್ರಿತ ಕೊಠಡಿಗಳ
ತಣ್ಣಗಿನ ಕಥೆಗಳಿವು....

-ನಿಷಾದ

Comments

  1. these are the bitter truths... thanks for the complements.. let thoughts keep coming so that i can keep writing...!!!

    ReplyDelete

Post a Comment

Popular Posts