ನಿಶೆಯ ಸಾಮ್ರಾಜ್ಯ...

ನಿಶೆಯ ಸಾಮ್ರಾಜ್ಯವಿದು,
ಕಗ್ಗತ್ತಲ ಕೂಪವಲ್ಲ, ನೆರಳು ಬೆಳಕಿನಾಟ..
ನಕ್ಷತ್ರ ಕಂಗಳ, ತಿಳಿ ನೀಲಿ ಮೋಡಗಳ
ಕೇಶರಾಶಿಯ ಬೆಡಗಿ,
ಮುಡಿಯಲ್ಲಿ ಬೀದಿಗೆ ಚಂದಿರನ
ಮಲ್ಲಿಗೆಯ ಮಾಲೆಯಂತೆ ಮುಡಿದು,
ಬೀಸುವ ತಂಗಾಳಿಯಲಿ
ಮೆಲುದನಿಯಲಿ, ಹಾಡೊಂದ ಹಾದಿ
ನಕ್ಕಳೆಂದರೆ..
ಎದೆಯಲ್ಲಿ ಕನಸುಗಳ ಭೋರ್ಗರೆತ,
ಕಣ್ಣಲ್ಲಿ ಉಲ್ಲಾಸದ ಜಲಪಾತ..!!
ಉಷೆಯಲ್ಲ, ನಿಷೆಯಿವಳು
ದಿನ ದಿನಕ್ಕೆ ಬದಲಾಗುವ ಸೌಂದರ್ಯ,
ಪೌರ್ಣಿಮೆಯ ದಿನದಲ್ಲಿ
ತುಂಬುನಗೆಯ ಹದಿನಾರರ ಚೆಲುವೆ..
ಅಮವಾಸ್ಯೆಯಲಿ- ಪ್ರಬುಧ್ಧ
ಗಂಭೀರ ನಿರಾಭರಣ ಸುಂದರಿ..
ಈ ಸುಂದರ ಲೋಕದಲಿ, ಕತ್ತಲೆಯ ರಾಜ್ಯದಲಿ
ಎಲ್ಲ ನೆನಪುಗಳ ಮರೆಸಿ,
ಹೋಗೋಣ ಕನಸುಗಳ ಅರಸಿ...

-ನಿಷಾದ

Comments

Popular Posts