ಕಾಲ...


ಕಾಲವು ಹಾಗೆಯೇ
ಓಡುತ್ತಲೇ ಇರುತ್ತದೆ,
ಯಾರಿಗೂ ಹೇಳದೆ, ಯಾರಿಗೂ ಕಾಯದೆ...
ನಿನ್ನೆಯಷ್ಟೇ ಆಡಿದ ಮಣ್ಣು ಇಂದು ತೃಣವಾಗಿದೆ...
ನಿನ್ನೆಯೂ ಅದು ಮಣ್ಣೇ ಆಗಿತ್ತಲ್ಲವೆ?
ಬೆಳೆದು ನಿಂತ ಜಗವು
ಕಣ್ರೆಪ್ಪೆ ತೆರೆಯುವಷ್ಟರಲ್ಲಿ ಬದಲಾಗಿದೆ..
ಅರ್ಥವಿಲ್ಲದ ಜಗದಲ್ಲಿ
ಶಾಸ್ತ್ರ ಬರೆದರೂ ಸರಿಯೇ...
ಕಾಲ ನಿಲ್ಲದು ಯಾರಿಗೂ ಕಾಯದು...
ಓಡುವ ಜಗವು ಎಲ್ಲೋ, ಏನನ್ನೋ
ಮರೆತಿದೆ...
ಮರೆತಿದ್ದು ಏನೆಂದು ನೆನಪಿಲ್ಲ ಯಾರಿಗೂ
ಮರೆತಿದ್ದು ಮಾತ್ರ ನೆನಪಾಗಿದೆ ಎಲ್ಲರಿಗೂ..
ಸಣ್ಣ ನಗು, ಮಾತು,
ನಿಷ್ಕಲ್ಮಶ ಪ್ರೀತಿ,
ಎಲ್ಲವನು ಮರೆತು ಕಾಲ ಓಡುತಿದೆ..
ಕಾಣದ ಗುರಿಯೆಡೆಗೆ....
-ನಿಷಾದ

Comments

Popular Posts