ನಿಶ್ಯಬ್ಧ


ತೆಳು ಬಿಸಿಲ ಝಳ,
ಅಡಿಕೆ - ತೆಂಗು - ಮಾವುಗಳ ಮೆಲು ನರ್ತನ,
ಗಾಳಿಯ ಮಂದ ನಡಿಗೆ,
ಮನೆಯ ಸೂರಿನೆಡೆ ದಿಟ್ಟಿ ನೆಟ್ಟಾಗ
ಕಾಡಿದ್ದು, ಜೊತೆಗೂಡಿದ್ದು
ಶುಧ್ಧ ಮೌನ!
ಉಸಿರಿನ ಸಂಚಾರವೂ ಕೇಳುವಂತ,
ಆ ಲಯಕ್ಕೇ ತಲೆದೂಗುವಂತ
ಈ ಮೌನ, ಸಂಗೀತ!
ನನ್ನೀ ಬಾಳನ್ನು ಒಂದು ಚಿತ್ರದಂತೆ,
ಸಂಬಂಧವಿಲ್ಲದ ಪ್ರೇಕ್ಷಕನಂತೆ,
ಅವಲೋಕಿಸಲೆಡೆ ಮಾಡುವ
ದಿವ್ಯ ನಿಶ್ಯಬ್ಧ!
ಇಲ್ಲಿ ತಪ್ಪಿಗೆ ನಾಚಿಕೆಯಿಲ್ಲ, ಸರಿಗೆ ಹೆಮ್ಮೆಯಿಲ್ಲ,
ಇದು ಕೇವಲ ವಿಶ್ಲೇಷಣೆ,
ಸ್ಪಷ್ಟನೆ, ಗ್ರಹಣೆ ಮತ್ತು ಮುಂದಾಲೋಚನೆ,
ಸಬಂಧಗಳು, ಕಷ್ಟ- ಕೋಟಲೆಗಳು,
ಸಂಕೀರ್ಣ ಒಲವು- ನಿಲುವುಗಳು,
ಅಪೇಕ್ಷೆ - ಉಪೇಕ್ಷೆ- ನಿರೀಕ್ಷೆಗಳು,
ಎಲ್ಲವೂ ಈ ಬೆಂಕಿಯಲ್ಲಿ ಭಸ್ಮ;
ಕಡೆಯಲ್ಲಿ ಈ ಬೂದಿಯೂ
ಬರಿದಾಗಿ ಉಳಿದಿತು,
ಔನ್ನತ್ಯದೆಡೆಗೆ ಕೊಂಡೊಯ್ಯುವ
ಗಂಭೀರ ಶೂನ್ಯ!

- ನಿಷಾದ

Photo credits: https://hybridpedagogy.org/essential-silence/

Comments

Post a Comment

Popular Posts