ಅರ್ಥವಿಲ್ಲದ ಅರ್ಥಶಾಸ್ತ್ರ



ಬಯಕೆ, ಬೇಡಿಕೆ, ಪೂರೈಕೆ
ಬದುಕಿಗೆ ಆಹಾರ, ಆಧಾರ....

ಜೀವವನು ತೇಯ್ದು, ನೋವನ್ನೇ ಉಂಡು
ನೆತ್ತರ ಕುದಿಯ ಒತ್ತಿಟ್ಟ ಜನಕೆ,
ಹೆಜ್ಜೆ-ಹೆಜ್ಜೆಗೆ ಚುಚ್ಚಿ
ಗಾಯದ ಕೀವ ಕೆರಳಿಸಿ
ಜೀವಕೇ ಕುತ್ತು ತರುವ ಚುಚ್ಚುನುಡಿಗಳ
ವಿಷದಂತೆ ನುಂಗಿ, ನಗುವ ಜನಕೆ
ಎಲ್ಲಿಯ ಬಯಕೆ? ಸತ್ತ ಹೆಣಕೆ!

ಕಣ್ಣ ಜ್ಯೋತಿಯ ಕಿಡಿಯ ಭಗ್ಗನೆ ಹೊತ್ತಿಸಿ
ಸುತ್ತಲಿನದೆಲ್ಲ ನುಂಗುವ
ಕಣ್ಣೀರಿಡುವ ಮುಗ್ಧರ ಅವಿರತ ನರಳಿಸಿ
ಅರೆಜೀವವಾದಾಗ ಅವರ ರಕ್ತ-ಮಾಂಸ ತಿನ್ನುವ
ಸಿದ್ಧಾಂತಗಳ ನೆಪದಲ್ಲಿ ತೆವಲು ತೀರಿಸಿಕೊಳ್ಳುವ
ಬೇಳೆ ಬೇಯಿಸಿಕೊಳ್ಳುವ ಹಿಂಡಿಗೆ
ಎಂತೆಂತಹ ಬೇಡಿಕೆ? ರಕ್ಕಸರ ಕುಲಕೆ?

ಕೋಣಗಳೆರಡರ ಬಡಿದಾಡಲು ಬಿಟ್ಟು
ಕೂತು ಮಜ ನೋಡುವ- ಚಪ್ಪಾಳೆ ತಟ್ಟುವ
ಕಂಡ ಕಂಡದ್ದೆಲ್ಲಾ ಬಾಚಿ, ಗುಡ್ಡೆ ಹಾಕಿ
ಬೇಕು- ಬೇಕೆಂದು ಕೊಡದವರ ಚರ್ಮ ಸುಲಿಯುವ
ಬಡಿದು ಹದ ಮಾಡಿದ ಕಣ್ಣೀರ
ತುಪ್ಪಳದಲ್ಲಿ ಮಲಗಿ ಸುಖಿಸುವ ಜಾತಿಗೆ...
ಎಷ್ಟರ ಪೂರೈಕೆ? ಜಿಗಣೆಗಳ ದಂಡಿಗೆ!!

ನಿಷಾದ

Photo credit: https://www.nasdaq.com/articles/know-your-coins-public-vs-private-cryptocurrencies-2017-09-22

Comments

  1. bhava bandayaddu..adara bagfe nangenoo jasti gottilla. .nirupane inno chennagirabahuditteno....tumba dinagala nantara nimma baraha odide ...khushi aytu ...bareyuttiri...namaste :-)

    ReplyDelete

Post a Comment

Popular Posts