Skip to main content

Posts

Featured

ನೆನಪುಗಳು

  ನಿನ್ನ ನೆನಪುಗಳು-  ಒಂಟಿತನದ ಕತ್ತಲೆಯ ರಾತ್ರಿಯಲಿ ನಕ್ಷತ್ರಗಳು,  ಮಿನುಗಿ - ಮಿನುಗಿ ಹೆಚ್ಚಿಸುವುದು  ಏಕಾಂಗಿಯ ತಿಮಿರದ ಸೊಬಗನ್ನು.  ನಿನ್ನ ನೆನಪುಗಳು -  ಬೇಸರದ ಚಳಿಹೊತ್ತಲ್ಲಿ ಉರಿಯುವ ಸೌದೆಗಳು, ಮನಸಿಗೆ ಬೆಚ್ಚನೆಯ ಹಿತ ನೀಡುತಾ  ನಿಗಿ- ನಿಗಿ ಹೊಳೆಯುತಾ ಮೈಮನಸಿಗೆ ಈಯುವುದು ಹಬ್ಬವನ್ನು.  ನಿನ್ನ ನೆನಪುಗಳು -  ಕುಂದಾದ್ರಿಯ ಇಬ್ಬನಿಯ ಮೋಡಗಳು,  ಭಾವಲಹರಿಯ ಸೂರ್ಯೋದಯವ ರಂಗೇರಿಸುತ್ತಾ  ಕಟ್ಟುತ್ತವೆ ಮಾಯಾಲೋಕವನ್ನು.  ನಿನ್ನ ನೆನಪುಗಳು -  ಕ್ಷುಲ್ಲಕ ಬಾಳಿನ ನಡುವಿನ ಕಾಡಿನ ಬಗೆಗಿನ ಮಾತುಗಳು,  ಆಡಿದಷ್ಟೂ ಸಾಲದೆ ಹುಚ್ಚೆಬ್ಬಿಸುವುದು ಹಸಿರು ಕನಸುಗಳನ್ನು.  ನಿನ್ನ ನೆನಪುಗಳು -  ನೀರವತೆಯ ಸಂಜೆಯಲಿ ದೂರದಿಂದ ತೇಲಿ ಬರುವ ಮೀರಾ ಭಜನೆಗಳು, ಬೀಸುವ ಗಾಳಿಯಲ್ಲೂ ಪಸರಿಸುವುದು ಅದಮ್ಯ ಪ್ರೇಮವನ್ನು. - ನಿಷಾದ 

Latest posts

ಒಂದು ಮರದ ಸುತ್ತ

ಪ್ರಶ್ನೆಗಳು

ಸಾವಿನ ಹೊಣೆ

ಗುಟ್ಟು

ಜನ ಮರಳೋ, ಜಾತ್ರೆ ಮರುಳೋ!

ಖಿನ್ನತೆ

ಅದ್ವೈತ

ನಿಶ್ಯಬ್ಧ

ಬದುಕಿನ ಮತ್ತೊಂದು ಮಜಲಿನಲ್ಲಿ- ಚೆನ್ನೈನಲ್ಲಿ

ಅರ್ಥವಿಲ್ಲದ ಅರ್ಥಶಾಸ್ತ್ರ